ವೃಕ್ಷಗಳ ಪಟ್ಟೆ ಎಂಬುದು ವೃಕ್ಷಗಳು ಬೆಳೆಯುವ ಅವಕಾಶವನ್ನು ಹೊಂದಿರುವಂತಹಾ ವಾಸಸ್ಥಾನ/ವಸತಿಪ್ರದೇಶಗಳ ಒಂದು ಕೊನೆಯಾಗಿರುತ್ತದೆ. ವೃಕ್ಷಗಳ ಪಟ್ಟೆಯಿಂದಾಚೆಗೆ, ಸೂಕ್ತವಲ್ಲದ ಪರಿಸರೀಯ ಪರಿಸ್ಥಿತಿಗಳ ಕಾರಣದಿಂದಾಗಿ (ಸಾಧಾರಣವಾಗಿ ತಂಪಾದ ತಾಪಮಾನದ ಸ್ಥಿತಿ, ಗಾಳಿಯ ಒತ್ತಡ ಸಾಕಷ್ಟಿರದ ಪರಿಸ್ಥಿತಿ, ಅಥವಾ ತೇವಾಂಶದ ಕೊರತೆ) ಅವುಗಳು ಬೆಳೆಯಲು ಸಾಧ್ಯವಾಗುವುದಿಲ್ಲ. ಕೆಲವರು ಇದಕ್ಕೆ ಹೆಚ್ಚುವರಿಯಾಗಿ ವೃಕ್ಷಗಳು ಕಾಂಡಗಳನ್ನು ಬೆಳೆಸಿಕೊಳ್ಳಲು ಸಾಧ್ಯವಾಗುವ ಇನ್ನೂ ದಟ್ಟವಾದ ಚೌಬೀನೆಪಟ್ಟೆ ಯನ್ನು ಕೂಡಾ ಪ್ರತ್ಯೇಕವಾಗಿ ಗುರುತಿಸುತ್ತಾರೆ. ವೃಕ್ಷಗಳ ಪಟ್ಟೆಯ ಪ್ರದೇಶದಲ್ಲಿ, ಮರಗಳ ಬೆಳವಣಿಗೆಯು ಬಹುತೇಕ ತೀರಾ ಕುಂಠಿತವಾಗಿರುತ್ತದೆ, ಅಲ್ಲಿನ ಕಡೆಯ ಸಾಲಿನ ವೃಕ್ಷಗಳು ಹೆಚ್ಚೇನೂ ಎತ್ತರವಿಲ್ಲದ, ದಟ್ಟವಾಗಿ ಜೊಂಡುಗಟ್ಟಿದ ಪೊದೆಗಳನ್ನು ಹೊಂದಿರುತ್ತದೆ. ಇವುಗಳು ಮಾರುತದ ಪ್ರಭಾವದಿಂದ ಹೀಗೆ ರೂಪುಗೊಂಡಿದ್ದರೆ ಅವುಗಳನ್ನು 'ಸುರುಳಿ ಸುತ್ತಿಕೊಂಡಿರುವ ಮರ' ಎಂಬರ್ಥದ ಜರ್ಮನ್‌ ಪದವಾದ ಕ್ರುಮ್ಮ್‌ಹೋಲ್ಜ್‌‌ ಸಂರಚನೆ ಎಂಬ ಹೆಸರಿನಿಂದ ಕರೆಯುತ್ತಾರೆ. ವೃಕ್ಷಗಳ ಪಟ್ಟೆಯು ಕೂಡಾ, ಇನ್ನೂ ಹಲವು ನೈಸರ್ಗಿಕ ಸ್ವರೂಪಗಳಂತೆಯೇ (ಉದಾಹರಣೆಗೆ ಸರೋವರದ ಮೇರೆಗಳಂತೆ), ದೂರದಿಂದ ನೋಡಿದಾಗ ಸರಳ ಸುಸ್ಪಷ್ಟ ಸ್ವರೂಪ ಹೊಂದಿದಂತೆ ಕಂಡುಬಂದರೂ, ಸಾಕಷ್ಟು ಸಮೀಪವಾಗಿ ಹೋಗಿ ನೋಡಿದರೆ ಬಹುತೇಕ ಸ್ಥಳಗಳಲ್ಲಿ ಸ್ವಲ್ಪಮಟ್ಟಿಗೆ ವ್ಯತ್ಯಾಸಗಳು ಗೋಚರಿಸತೊಡಗುತ್ತವೆ. ವೃಕ್ಷಗಳು ಹೆಚ್ಚು ರಕ್ಷಣೆಯಿಲ್ಲದ ವಾತಾವರಣದ ಸಂದರ್ಭದಲ್ಲಿ ಹೆಚ್ಚು ಎತ್ತರವಿಲ್ಲದೆ ತಾವೇ ಸ್ವತಃ ಬೆಳೆಯುವುದನ್ನು ನಿಲ್ಲಿಸುವವರೆಗೆ ಬೆಳೆಯುತ್ತಾ ಹೋಗುತ್ತವೆ. == ವಿಧಗಳು == ಭೂವಿಜ್ಞಾನಶಾಸ್ತ್ರ ಹಾಗೂ ಪರಿಸರಶಾಸ್ತ್ರಗಳಲ್ಲಿ ಹಲವು ವಿಧಗಳ ವೃಕ್ಷಗಳ ಪಟ್ಟೆಗಳನ್ನು ವಿಷದೀಕರಿಸಲಾಗಿದೆ: === ಉನ್ನತ ಪರ್ವತದ/ಅಲ್ಪೈನ್‌ ಗಿಡ === ಇದು ವೃಕ್ಷಗಳು ಬೆಳೆಯಲು ಸಾಧ್ಯವಿರುವ ಅತ್ಯಂತ ಉನ್ನತ ಎತ್ತರದ ಪ್ರದೇಶವಾಗಿರುತ್ತದೆ; ಇದಕ್ಕಿಂತಾ ಮೇಲೆ ಹೋದರೆ, ಆ ಪ್ರದೇಶ ತೀರಾ ತಣ್ಣಗಿರುತ್ತದೆ ಅಥವಾ ಹಿಮದ ಹೊದಿಕೆಗಳು ವರ್ಷದ ಬಹುತೇಕ ಭಾಗದ ಅವಧಿಯಲ್ಲಿಯೂ ಆವರಿಸಿದ್ದು ವೃಕ್ಷಗಳು ಅಲ್ಲಿ ಉಳಿಯಲು ಆಸ್ಪದವಿರುವುದಿಲ್ಲ. ಸಾಧಾರಣವಾಗಿ ಪರ್ವತಗಳಿಗೆ ಸಂಬಂಧಿಸಿದಂತೆ ಹೆಸರಿಸುವ ವೃಕ್ಷಗಳ ಪಟ್ಟೆಗಿಂತ ಮೇಲಿರುವ ವಾತಾವರಣಕ್ಕೆ ಉನ್ನತ ಪರ್ವತದ/ಅಲ್ಪೈನ್‌ ವಾತಾವರಣ ಎಂದು ಕರೆಯಲಾಗುತ್ತದೆ, ಹಾಗೂ ಅಲ್ಲಿನ ಭೂಪ್ರದೇಶವನ್ನು ಉನ್ನತ ಪರ್ವತದ/ಅಲ್ಪೈನ್‌ ಪಾಚಿ ಬಯಲು/ಜೌಗುಪ್ರದೇಶ ಎಂದು ಕರೆಯಬಹುದಾಗಿದೆ. ಉತ್ತರ ಗೋಳಾರ್ಧದಲ್ಲಿ ಉತ್ತರ ದಿಕ್ಕಿನೆಡೆಗೆ ಮುಖ ಮಾಡಿರುವ ಇಳಿಜಾರು ಪ್ರದೇಶಗಳಲ್ಲಿರುವ ವೃಕ್ಷಗಳ ಪಟ್ಟೆಗಳ ಎತ್ತರವು ದಕ್ಷಿಣದಿಕ್ಕಿನೆಡೆಗೆ ಮುಖ ಮಾಡಿರುವ ಇಳಿಜಾರು ಪ್ರದೇಶಗಳಿಗಿಂತ ಕಡಿಮೆಯಿರುತ್ತದೆ ಏಕೆಂದರೆ ಹೆಚ್ಚಾದ ನೆರಳಿನಿಂದಾಗಿ ಹಿಮದ ಪದರವು ಕರಗಲು ಹೆಚ್ಚು ಸಮಯವನ್ನು ತೆಗೆದುಕೊಳ್ಳುವುದರಿಂದ ವೃಕ್ಷಗಳಿಗೆ ಬೆಳೆಯುವ ಅವಧಿಯನ್ನು ಮೊಟಕುಗೊಳಿಸುತ್ತದೆ. ದಕ್ಷಿಣ ಗೋಳಾರ್ಧದಲ್ಲಿ ಇದಕ್ಕೆ ವಿರುದ್ಧವಾದ ಪ್ರಕ್ರಿಯೆಯು ನಡೆಯುತ್ತದೆ. === ಮರುಭೂಮಿ === ಈ ಪ್ರದೇಶಗಳು ವೃಕ್ಷಗಳು ಬೆಳೆಯಬಲ್ಲ ಅತ್ಯಂತ ಶುಷ್ಕವಾದ ಪ್ರದೇಶಗಳಾಗಿರುತ್ತವೆ; ಎಂದರೆ ವೃಕ್ಷಗಳು ಬೆಳೆಯಲು ಅಗತ್ಯವಾದಷ್ಟು ಪ್ರಮಾಣದ ಮಳೆಯನ್ನು ಪಡೆಯದ ಶುಷ್ಕವಾದ ಮರುಭೂಮಿ ಪ್ರದೇಶಗಳು ಇವಾಗಿರುತ್ತದೆ. ಈ ಪ್ರದೇಶಗಳನ್ನು "ಕೆಳಮಟ್ಟದ" ವೃಕ್ಷಗಳ ಪಟ್ಟೆ ಎಂದು ಕರೆಯುವುದು ರೂಢಿಯಾಗಿದ್ದು ಇವು ನೈಋತ್ಯ ಯುನೈಟೆಡ್‌ ಸ್ಟೇಟ್ಸ್‌‌ನ ಮರುಭೂಮಿ ಪ್ರದೇಶದಲ್ಲಿ ಸಾಧಾರಣ ಸುಮಾರು 5000 ftಗಳಿಗಿಂತಲೂ (1500 ) ಕಡಿಮೆ ಔನ್ನತ್ಯದಲ್ಲಿ ಕಾಣಿಸಿಕೊಳ್ಳುತ್ತವೆ. ಮರುಭೂಮಿ ವೃಕ್ಷಗಳ ಪಟ್ಟೆಯು ಧೃವಪ್ರದೇಶಗಳೆಡೆಗೆ ಮುಖ ಮಾಡಿದ ಇಳಿಜಾರು ಪ್ರದೇಶಗಳು ವಿಷುವದ್ರೇಖೆಯೆಡೆಗೆ ಮುಖ ಮಾಡಿದ ಇಳಿಜಾರು ಪ್ರದೇಶಗಳಿಗಿಂತ ಎತ್ತರದಲ್ಲಿರುವ ಪ್ರವೃತ್ತಿ ಹೊಂದಿರುತ್ತವೆ, ಏಕೆಂದರೆ ಧೃವಪ್ರದೇಶಗಳೆಡೆಗೆ ಮುಖ ಮಾಡಿದ ಇಳಿಜಾರು ಪ್ರದೇಶಗಳಲ್ಲಿರುವ ಹೆಚ್ಚಿನ ಪ್ರಮಾಣದ ನೆರಳು ಆಯಾ ಇಳಿಜಾರು ಪ್ರದೇಶಗಳನ್ನು ತಂಪಾಗಿರಿಸುತ್ತಲ್ಲದೇ ತೇವಾಂಶವು ವೇಗವಾಗಿ ಆವಿಯಾಗದಂತೆ ತಡೆಗಟ್ಟುತ್ತದೆ, ಇದರಿಂದಾಗಿ ವೃಕ್ಷಗಳಿಗೆ ದೀರ್ಘಕಾಲದ ಬೆಳವಣಿಗೆಯ ಅವಧಿ ದೊರಕುತ್ತದೆ ಹಾಗೂ ಹೆಚ್ಚಿನ ಪ್ರಮಾಣದ ನೀರಿನ ಬಳಕೆಗೆ ಆಸ್ಪದವಿರುತ್ತದೆ. === ಮರುಭೂಮಿ - ಉನ್ನತ ಪರ್ವತದ/ಅಲ್ಪೈನ್‌ ಗಿಡ === ಕೆಲ ಪರ್ವತಮಯ ಪ್ರದೇಶಗಳಲ್ಲಿ, ಘನೀಕರಣ ಮಿತಿಗಿಂತ ಹೆಚ್ಚಿನ ಔನ್ನತ್ಯಗಳಲ್ಲಿ ಅಥವಾ ವಿಷುವದ್ರೇಖೆಯೆಡೆಗೆ ಮುಖ ಮಾಡಿದ ಹಾಗೂ ಗಾಳಿಮರೆಯ ಇಳಿಜಾರು ಪ್ರದೇಶಗಳು ಕಡಿಮೆ ಪ್ರಮಾಣದ ಮಳೆಗೆ ಹಾಗೂ ಸೌರ ವಿಕಿರಣಕ್ಕೆ/ಬಿಸಿಲಿಗೆ ಹೆಚ್ಚು ಒಡ್ಡಿಕೊಳ್ಳುವಿಕೆಗೆ ಕಾರಣವಾಗಬಹುದಾಗಿರುತ್ತದೆ. ಇದು ಮಣ್ಣನ್ನು ಶುಷ್ಕವಾಗಿಸುತ್ತದಲ್ಲದೇ ವೃಕ್ಷಗಳಿಗೆ ಸರಿಹೊಂದದ ಶುಷ್ಕವಾದ ಸ್ಥಳೀಯ ವಾತಾವರಣವನ್ನುಂಟಾಗುವುದಕ್ಕೆ ಕಾರಣವಾಗುತ್ತದೆ. 10,000 ftಗಳಿಗಿಂತಲೂ ಎತ್ತರವಿರುವ ಹವಾಯ್‌ ದ್ವೀಪಗಳಲ್ಲಿನ ಮೌನಾ ಲೋವಾದ ಇಳಿಜಾರು ಪ್ರದೇಶಗಳು ಇವಕ್ಕೆ ಉದಾಹರಣೆಯಾಗಿವೆ. ..ನ ಪಶ್ಚಿಮ ಭಾಗದ ಪರ್ವತಸಾಲುಗಳ ಹಲವು ದಕ್ಷಿಣದಿಕ್ಕಿನೆಡೆಗೆ ಮುಖ ಮಾಡಿದ ಬೆಟ್ಟಸಾಲುಗಳು ಉತ್ತರ ದಿಕ್ಕಿನೆಡೆಗೆ ಮುಖ ಮಾಡಿದವುಗಳಿಗಿಂತ ಅಲ್ಪ ಮಟ್ಟದ ವೃಕ್ಷಗಳ ಪಟ್ಟೆಯನ್ನು ಹೊಂದಿರುತ್ತವೆ, ಇದಕ್ಕೆ ಕಾರಣ ಸೂರ್ಯನ ಬೆಳಕಿಗೆ ಹೆಚ್ಚು ಒಡ್ಡಿಕೊಳ್ಳುವುದು ಹಾಗೂ ಶುಷ್ಕತೆಯಿರುವುದು. === ಡಬಲ್‌/ಮುದುಡಿದ ಮರಸಾಲು/ಸುರುಳಿ ಮರಸಾಲು === ಬೇರೆ ಬೇರೆ ವಿಧಗಳ ಮರಗಳ ತಳಿಗಳು ಜಲಕ್ಷಾಮಗಳಿಗೆ ಹಾಗೂ ತಂಪಾಗುವಿಕೆಗಳ ಸಹಿಷ್ಣುತೆಗಳನ್ನು ಬೇರೆ ಬೇರೆ ಪ್ರಮಾಣಗಳಲ್ಲಿ ಹೊಂದಿರುತ್ತವೆ. ಮಹಾಸಾಗರಗಳು ಅಥವಾ ಮರುಭೂಮಿಗಳಿಂದ ಪ್ರತ್ಯೇಕಿಸಲ್ಪಡುವ ಪರ್ವತಸಾಲುಗಳು ಸೀಮಿತ ಸಂಗ್ರಹಗಳ ಮರಗಳ ತಳಿಗಳನ್ನು ಹೊಂದಿರಬಹುದಾಗಿದ್ದು ಅವುಗಳಲ್ಲಿ ಕೆಲವು ತಳಿಗಳಿಗೆ ಉನ್ನತ ಪರ್ವತದ/ಅಲ್ಪೈನ್‌ ವೃಕ್ಷಗಳ ಪಟ್ಟೆಗಿಂತ ಮೇಲಿನ ಅಂತರಗಳಿದ್ದರೆ, ಉಳಿದ ಕೆಲವು ತಳಿಗಳಿಗೆ ಮತ್ತೂ ಕೆಳಗೆ ಮರುಭೂಮಿ ವೃಕ್ಷಗಳ ಪಟ್ಟೆಗಳಿಗಿಂತ ಕೆಳಮಟ್ಟದಲ್ಲಿರುತ್ತವೆ. ಉದಾಹರಣೆಗೆ ಉತ್ತರ ಅಮೇರಿಕಾದ ಭಾರೀ/ಬೃಹತ್‌ ಜಲಾನಯನ ಭೂಮಿಯಲ್ಲಿರುವ ಹಲವು ಪರ್ವತ ಶ್ರೇಣಿಗಳು ಪಿನ್ಯಾನ್‌ ತಳಿಗಳ ಪೈನ್‌ ಹಾಗೂ ಜ್ಯೂನಿಪರ್‌ ಮರಗಳ ಕೆಳಮಟ್ಟದ ವಲಯ/ಮಂಡಲಗಳು ಮಧ್ಯಂತರವಾಗಿ ಪೊದೆಗಳಿಂದ ಕೂಡಿದ ಆದರೆ ಮರಗಳಿಲ್ಲದ ವಲಯ ಪ್ರದೇಶಗಳಿಂದ ಲಿಂಬರ್‌‌ ಮತ್ತು ಬ್ರಿಸ್ಟಲ್‌ಕೀನ್‌ ಪೈನ್‌ಗಳ ಮೇಲಿನ ವಲಯದಿಂದ ಪ್ರತ್ಯೇಕಿಸಲ್ಪಟ್ಟಿದೆ. === ಅಭಿಮುಖತೆ/ಎಕ್ಸ್‌‌ಪೋಷರ್‌ === ಕರಾವಳಿ ಪ್ರದೇಶಗಳಲ್ಲಿ ಹಾಗೂ ಪ್ರತ್ಯೇಕವಾಗಿರುವ ಪರ್ವತಗಳಲ್ಲಿ ವೃಕ್ಷಗಳ ಪಟ್ಟೆಯು ಅನೇಕವೇಳೆ ಒಳನಾಡಿನಲ್ಲಿ ಅದಕ್ಕೆ ಸದೃಶವಾಗಿರುವ ಎತ್ತರಗಳಿಗಿಂತ ಸಾಕಷ್ಟು ಕಡಿಮೆ ಎತ್ತರದಲ್ಲಿರುತ್ತವೆ ಹಾಗೂ ಮತ್ತಷ್ಟು ಸಂಕೀರ್ಣ ಪರ್ವತ ವ್ಯವಸ್ಥೆಗಳಲ್ಲಿ ಹೆಚ್ಚಿನ ಎತ್ತರದಲ್ಲಿರುತ್ತವೆ, ಏಕೆಂದರೆ ಬಲವಾದ ಮಾರುತಗಳು ಮರಗಳ ಬೆಳವಣಿಗೆಯನ್ನು ಕುಂದಿಸುತ್ತವೆ. ಇದರ ಜೊತೆಗೆ ಹೆಚ್ಚುವರಿಯಾಗಿ ಪ್ರಪಾತದ ಬುಡದಲ್ಲಿಯ ಓರೆಕಲ್ಲುರಾಶಿ ಅಥವಾ ಬಯಲಿನಲ್ಲಿನ ರಕ್ಷಣೆಯಿಲ್ಲದ ಶಿಲಾ ಸ್ವರೂಪಗಳಲ್ಲಿ ಕಂಡುಬರುವಂತಹಾ ಸೂಕ್ತವಾದ ಮಣ್ಣಿನ ಕೊರತೆಯು ವೃಕ್ಷಗಳು ಅಗತ್ಯವಾದಷ್ಟು ಬುಡಾಧಾರವನ್ನು ಪಡೆದುಕೊಳ್ಳಲು ಅನುವು ಮಾಡಗೊಡದಿರುವುದರಿಂದ ಅವುಗಳನ್ನು ಸೂರ್ಯನ ಬಿಸಿಲಿಗೆ ಹಾಗೂ ಜಲಕ್ಷಾಮಗಳಿಗೆ ಈಡು ಮಾಡುತ್ತದೆ. === ಆರ್ಕ್‌‌ಟಿಕ್‌‌/ಉತ್ತರ ಧೃವ === ಇದು ವೃಕ್ಷಗಳು ಬೆಳೆಯಬಲ್ಲ ಉತ್ತರ ಗೋಳಾರ್ಧದಲ್ಲಿನ ಅತ್ಯಂತ ಉತ್ತರದಲ್ಲಿನ ಅಕ್ಷಾಂಶದ ಪ್ರದೇಶವಾಗಿದೆ; ಮತ್ತಷ್ಟು ಉತ್ತರ ದಿಕ್ಕಿಗೆ ಹೋದರೆ, ವೃಕ್ಷಗಳು ಉಳಿಯಲಾರದಷ್ಟು ಶೀತಪ್ರದೇಶವಾಗಿರುತ್ತದೆ. ವಿಪರೀತ ಶೀತವಾದ ತಾಪಮಾನಗಳು ವೃಕ್ಷಗಳ ಅಂತರ್ಗತ ಜೀವರಸವನ್ನು ಘನೀಕೃತವಾಗಿಸುವ ಮೂಲಕ ಅವುಗಳನ್ನು ಸಾಯಿಸುತ್ತದೆ. ಇಷ್ಟು ಮಾತ್ರವಲ್ಲದೇ ಮಣ್ಣಿನಲ್ಲಿನ ಶೀತಕೆಳಸ್ತರವು ವೃಕ್ಷಗಳು ತಮಗೆ ಅಗತ್ಯವಾದ ಸಂರಚನಾತ್ಮಕ ಬೆಂಬಲವನ್ನು ಪಡೆದುಕೊಳ್ಳಲು ಬೇಕಾದ ಆಳಕ್ಕೆ ತನ್ನ ಬೇರುಗಳನ್ನು ಇಳಿಸಲು ಆಗದಂತೆ ಮಾಡುತ್ತದೆ. === ಅಂಟಾರ್ಕ್‌ಟಿಕ್‌/ದಕ್ಷಿಣ ಧೃವ === ಇದು ವೃಕ್ಷಗಳು ಬೆಳೆಯಬಲ್ಲ ದಕ್ಷಿಣ ಗೋಳಾರ್ಧದಲ್ಲಿನ ಅತ್ಯಂತ ದಕ್ಷಿಣದಲ್ಲಿನ ಅಕ್ಷಾಂಶದ ಪ್ರದೇಶವಾಗಿದೆ; ಮತ್ತಷ್ಟು ದಕ್ಷಿಣಕ್ಕೆ ಹೋದರೆ, ವೃಕ್ಷಗಳು ಉಳಿಯಲಾರದಷ್ಟು ಶೀತಪ್ರದೇಶವಾಗಿರುತ್ತದೆ. ಇದೊಂದು ಯಾವುದೇ ವಿಷದೀಕರಿಸಿದ ನಿರ್ದಿಷ್ಟ ಭೂಸ್ಥಾನಕ್ಕೆ ಅನ್ವಯಿಸಿದ ಸೈದ್ಧಾಂತಿಕ ಕಲ್ಪನೆಯಾಗಿದೆ. ಅಂಟಾರ್ಕ್‌ಟಿಕಾ/ದಕ್ಷಿಣ ಧೃವ ಅಥವಾ ಉಪ-ದಕ್ಷಿಣ ಧೃವದ ದ್ವೀಪಗಳಲ್ಲಿ ಯಾವುದೇ ವೃಕ್ಷಗಳು ಬೆಳೆಯುವುದಿಲ್ಲ. ಈ ವೃಕ್ಷಗಳ ಪಟ್ಟೆಯು ವೃಕ್ಷಗಳು ಎಂದಿಗೂ ಬೆಳೆಯಲಾರದ ವಾತಾವರಣದಲ್ಲಿನ ತೀರ ದಕ್ಷಿಣದಲ್ಲಿನ ಸ್ಥಳವಾಗಿದ್ದು, ಒಂದೇ ವ್ಯತ್ಯಾಸವೆಂದರೆ ಉತ್ತರಧೃವದ ವೃಕ್ಷಗಳ ಪಟ್ಟೆಗಳಿಗೆ ಸದೃಶವಾದ ನಿಜವಾದ ವೃಕ್ಷಗಳ ಪಟ್ಟೆಗಳಿರುವ ಯಾವುದೇ ಭೂಪ್ರದೇಶಗಳು ಆ ವಲಯದಲ್ಲಿಲ್ಲ. === ಇತರೆ === ಇಂತಹಾ ಪ್ರದೇಶಗಳಲ್ಲಿನ ತಕ್ಷಣದ ಪರಿಸರವು ವೃಕ್ಷಗಳು ಬೆಳೆಯಲಿಕ್ಕೆ ತೀರ ವಿಷಮ ಪರಿಸ್ಥಿತಿಯನ್ನು ಹೊಂದಿರುತ್ತವೆ. ಈ ತರಹದ ಪರಿಸ್ಥಿತಿಗಳು ಯೆಲ್ಲೋಸ್ಟೋನ್‌ನಲ್ಲಿರುವಂತಹಾ ಶಾಖದಿಂದ ಕೂಡಿದ ಚಿಲುಮೆಗಳು ಅಥವಾ ಅಗ್ನಿಪರ್ವತಗಳಿಗೆ ಸಂಬಂಧಿಸಿದ ಭೂಮಿಯ ಒಳಗಿನ ಶಾಖದಿಂದ ಉಂಟಾಗುತ್ತದೆ, ಜೌಗು ಪ್ರದೇಶಗಳ ಬಳಿಯಲ್ಲಿರುವ ಮಣ್ಣಿನಲ್ಲಿ ಅತ್ಯುಗ್ರ ಆಮ್ಲತೆ, ಮಟ್ಟಸ ಒಣಭೂಮಿಗಳು ಅಥವಾ ಉಪ್ಪಿನಂಶವಿರುವ ಸರೋವರಗಳಿಗೆ ಸಂಬಂಧಿಸಿದ ಅಧಿಕ ಲವಣಾಂಶತೆ ಅಥವಾ ಬಹುತೇಕ ಮರಗಳ ಬೇರುಗಳಿಗೆ ಅಗತ್ಯವಾಗಿರುವ ಮಣ್ಣಿನಲ್ಲಿರುವ ಆಮ್ಲಜನಕವನ್ನು ಹೀರಿಕೊಳ್ಳುವಂತಹಾ ಅಂತರ್ಜಲದಿಂದ ಕೂಡಿದ ಭೂಪ್ರದೇಶಗಳಿಂದ ಹೀಗಾಗುತ್ತದೆ. ಸಮತಟ್ಟು ಜವುಗು ಭೂಮಿ ಹಾಗೂ ಸಾಧಾರಣ ಜವುಗು ಭೂಮಿಗಳ ಮೇರೆಗಳು ಈ ತರಹದ ಮುಕ್ತ/ಅನಾವೃತ ಪ್ರದೇಶಗಳಿಗೆ ಸರ್ವೇಸಾಮಾನ್ಯ ಉದಾಹರಣೆಗಳಾಗಿವೆ. ಆದಾಗ್ಯೂ, ಶಾಶ್ವತವಾಗಿ ತೇವಾಂಶ ಹೊಂದಿರುವ ಮಣ್ಣಿನಲ್ಲಿ ಬೆಳೆಯಲು ಹೊಂದಿಕೊಂಡಿರುವ ಬಾಲ್ಡ್‌ ಸೈಪ್ರೆಸ್‌ ಹಾಗೂ ಹಲವು ಮ್ಯಾಂಗ್ರೋವ್‌ ಮರಗಳ ತಳಿಗಳಂತಹಾ ವೃಕ್ಷಗಳು ಬೆಳೆಯುವ ಜೌಗುನೆಲಗಳಿಗೆ ಅಂತಹಾ ಯಾವುದೇ ಮೇರೆಗಳಿಲ್ಲ. ವಿಶ್ವದ ಕೆಲ ತೀರ ಶೀತದ ಭಾಗಗಳಲ್ಲಿ ಜೌಗು ಪ್ರದೇಶಗಳ ಸುತ್ತಮುತ್ತಲಿರುವ ವೃಕ್ಷಗಳ ಪಟ್ಟೆಗಳಿವೆ, ಅಂತಹಾ ಕಡೆಗಳಲ್ಲಿ ಬೆಳೆಯಲು ಸಾಧ್ಯವಾಗುವಂತಹಾ ಯಾವುದೇ ಸ್ಥಳೀಯ ವೃಕ್ಷಗಳ ತಳಿಗಳಿಲ್ಲ. ವಾತಾವರಣಕ್ಕೆ ಒಡ್ಡಿಕೊಳ್ಳುವ ಮನುಷ್ಯ-ನಿರ್ಮಿತ ಮಾಲಿನ್ಯಕ್ಕೀಡಾಗಿರುವ ಪ್ರದೇಶಗಳಲ್ಲಿ ಕೂಡಾ ವೃಕ್ಷಗಳ ಪಟ್ಟೆಗಳಿವೆ, ಮಾಲಿನ್ಯದ ಹೆಚ್ಚಿನ ಒತ್ತಡದಿಂದಾಗಿ ಎಳೆದಿರುವ ಹೊಸದಾದ ವೃಕ್ಷಗಳ ಪಟ್ಟೆಗಳು ಕೂಡಾ ಬೆಳೆದಿವೆ. ಇದಕ್ಕೆ ಉದಾಹರಣೆಗಳೆಂದರೆ ರಷ್ಯಾದಲ್ಲಿನ ನಿಕೆಲ್‌ ಪ್ರದೇಶದ ಸುತ್ತಲಿರುವ ಹಾಗೂ ಈ ಹಿಂದೆ ಎರ್ಜೆಬಿರ್ಗೆಯಲ್ಲಿದ್ದ ವೃಕ್ಷಗಳ ಪಟ್ಟೆಗಳು. == ಪ್ರಾತಿನಿಧಿಕ ಸಸ್ಯವರ್ಗ == ಕೆಲ ಪ್ರಾತಿನಿಧಿಕ ಉತ್ತರಧೃವದ ಹಾಗೂ ಉನ್ನತ ಪರ್ವತದ/ಅಲ್ಪೈನ್‌ ಮರಗಳ ಪಟ್ಟೆಗಳಲ್ಲಿ ಕಂಡುಬರುವ ಮರಗಳ ತಳಿಗಳು (ಕೋನಿಫರ್‌/ಶಂಕುಮರಗಳ ಪ್ರಾಬಲ್ಯತೆಯನ್ನು ಗಮನಿಸಿ): === ಯುರೇಷ್ಯಾ === ಡಹುರಿಯನ್‌ ಲಾರ್ಚ್‌ ಮರ (ಲ್ಯಾರಿಕ್ಸ್‌ ಜಿಮೆಲಿನೀ ) ಮೇಸ್‌ಡೋನಿಯನ್‌ ಪೈನ್‌ ಮರಗಳು (ಪೈನಸ್‌ ಪ್ಯೂಸ್‌ ) ಸ್ವಿಸ್‌ ಪೈನ್‌ ಮರ (ಪೈನಸ್‌ ಸೆಂಬ್ರಾ ) ಮೌಂಟೇನ್‌/ಪರ್ವ ಪೈನ್‌ ಮರ (ಪೈನಸ್‌ ಮುಗೋ ) ಆರ್ಕ್‌ಟಿಕ್‌ ವೈಟ್‌ ಬಿರ್ಚ್‌ ಮರ (ಬೆಟುಲಾ ಪ್ಯೂಬೆಸೆನ್ಸ್ . ಟಾರ್ಚುವೋಸಾ ) === ಉತ್ತರ ಅಮೆರಿಕಾ === ಸಬ್‌ಅಲ್ಪೈನ್‌ ಫಿರ್‌ ಮರ (ಏಬೀಸ್‌/ಅಬೀಸ್‌ ಲಾಸಿಯೋಚಾಕಾರ್ಪಾ ) ಸಬ್‌ಅಲ್ಪೈನ್‌ ಲಾರ್ಚ್‌ ಮರ (ಲೇ/ಲಾರಿಕ್ಸ್‌ ಲೈಯಾಲ್ಲೀ ) ಎಂಜೆಲ್‌ಮಾನ್ನ್‌‌ ಸ್ಪ್ರೂಸ್‌ ಮರ (ಪಿಸಿಯಾ ಎಂಜೆಲ್‌ಮಾನ್ನೀ ) ವೈಟ್‌ಬಾರ್ಕ್‌ ಪೈನ್‌ ಮರ (ಪೈನಸ್‌ ಅಲ್ಬಿಕಾಲಿಸ್‌ ) ಗ್ರೇಟ್‌ ಬೇಸಿನ್‌ ಬ್ರಿಸ್ಟಲ್‌ಕೋನ್‌ ಪೈನ್‌‌ ಮರ (ಪೈನಸ್‌ ಲಾಂಗೇವಾ ) ರಾಕಿ ಮೌಂಟೇನ್ಸ್‌ ಬ್ರಿಸ್ಟಲ್‌ಕೋನ್‌ ಪೈನ್‌‌ ಮರ (ಪೈನಸ್‌ ಅರಿಸ್ಟಾಟಾ ) ಫಾಕ್ಸ್‌ಟೇಲ್‌ ಪೈನ್‌ ಮರ (ಪೈನಸ್‌ ಬಾಲ್ಫೌರಿಯಾನಾ ) ಲಿಂಬರ್‌ ಪೈನ್‌ ಮರ (ಪೈನಸ್‌ ಫ್ಲೆಕ್ಸಿಲಿಸ್‌ ) ಪೊಟೊಸಿ ಪಿನ್ಯಾನ್‌ ಮರ (ಪೈನಸ್‌ ಕಲ್ಮಿನಿಕೋಲಾ ) ಬ್ಲ್ಯಾಕ್‌ ಸ್ಪ್ರೂಸ್‌ ಮರ (ಪಿಸಿಯಾ ಮರಿಯಾನಾ ) ಹಾರ್ಟ್‌ವೆಗ್‌ಸ್‌ ಪೈನ್‌ ಮರ (ಪೈನಸ್‌ ಹಾರ್ಟ್‌‌ವೆಜೀ ) === ದಕ್ಷಿಣ ಅಮೆರಿಕಾ === ಅಂಟಾರ್ಕ್‌ಟಿಕ್‌ ಬೀಚ್‌ ಮರ (ನೊಥೊಫಾಗಸ್‌ ಅಂಟಾರ್ಕ್‌ಟಿಕಾ ) ಲೆಂಗಾ ಬೀಚ್‌‌ ಮರ (ನೊಥೊಫಾಗಸ್‌ ಪುಮಿಲಿಯೋ ) ಪಾಲಿಲೆಪಿಸ್‌ ಮರ (ಪಾಲಿಲೆಪಿಸ್‌ ಟಾರಾಪಾಕಾನಾ ) === ಆಸ್ಟ್ರೇಲಿಯಾ === ಸ್ನೋ ಗಮ್‌ (ಯೂಕಲಿಪ್ಟಸ್‌ ಪಾಸಿಫ್ಲೋರಾ ) == ವಿಶ್ವದಾದ್ಯಂತ ಆಗಿರುವ ಹಂಚಿಕೆ == === ಅಲ್ಪೈನ್‌ ವೃಕ್ಷಗಳ ಪಟ್ಟೆಗಳು === ನಿರ್ದಿಷ್ಟ ಸ್ಥಳದಲ್ಲಿರುವ ಉನ್ನತ ಪರ್ವತದ/ಅಲ್ಪೈನ್‌ ವೃಕ್ಷಗಳ ಪಟ್ಟೆಯು, ಇಳಿಜಾರೊಂದರ ಅಭಿಮುಖತೆ, ಛಾಯಾ ಮಳೆಯ/ಅಲ್ಪಾಂಶ ಮಳೆಯ ಪ್ರದೇಶ ಹಾಗೂ ಯಾವುದಾದರೊಂದು ಭೌಗೋಳಿಕ ಧೃವದೊಂದಿಗಿರುವ ಅಂತರಗಳಂತಹಾ ಅನೇಕ ಸ್ಥಳೀಯ ಅನಿರ್ದಿಷ್ಟಾಂಶಗಳ ಮೇಲೆ ಅವಲಂಬಿಸಿದೆ. ಇದರೊಂದಿಗೆ, ಕೆಲ ಉಷ್ಣವಲಯದ ಅಥವಾ ದ್ವೀಪ ಪ್ರದೇಶೀಯ ಸ್ಥಳಗಳಲ್ಲಿ ಜೀವಭೌಗೋಳಿಕ ಉಪ-ಉನ್ನತ ಪರ್ವತದ/ಅಲ್ಪೈನ್‌ ವಾತಾವರಣಗಳಲ್ಲಿ ವಿಕಸನವನ್ನು ಹೊಂದಿದ ಮರಗಳ ತಳಿಗಳಿಗೆ ಸುಲಭಗಮ್ಯತೆಯ ಕೊರತೆ ಇರುವ ಪರಿಸ್ಥಿತಿಯು ಕೇವಲ ವಾತಾವರಣದ ಪ್ರಭಾವದಿಂದಲೇ ಉಂಟಾಗಬಹುದು ಎಂದು ನಿರೀಕ್ಷಿಸಿದ ಪ್ರಮಾಣಕ್ಕಿಂತ ಕಡಿಮೆ ಪ್ರಮಾಣದ ವೃಕ್ಷಗಳ ಪಟ್ಟೆಗಳು ಕಂಡುಬರಲಿಕ್ಕೆ ಕಾರಣವಾಗಬಹುದು. ಈ ತರಹದ ತಡೆಯಿರುವುದನ್ನು ಗಮನದಲ್ಲಿರುವಂತೆಯೇ, ವಿಶ್ವದಾದ್ಯಂತದ ವಿವಿಧ ಸ್ಥಳಗಳಲ್ಲಿರುವ ವೃಕ್ಷಗಳ ಪಟ್ಟೆಗಳ ಸ್ಥೂಲವಾದ ಪಟ್ಟಿ ಕೆಳಕಂಡಂತಿದೆ: === ಉತ್ತರಧೃವದ/ಆರ್ಕ್‌ಟಿಕ್‌ ವೃಕ್ಷಗಳ ಪಟ್ಟೆಗಳು === ಮೇಲೆ ತೋರಿಸಿದ ಉನ್ನತ ಪರ್ವತದ/ಅಲ್ಪೈನ್‌ ವೃಕ್ಷಗಳ ಪಟ್ಟೆಗಳ ಹಾಗೆಯೇ, ಧೃವಪ್ರದೇಶಗಳಲ್ಲಿನ ವೃಕ್ಷಗಳ ಪಟ್ಟೆಗಳು ಕೂಡಾ ಇಳಿಜಾರೊಂದರ ಅಭಿಮುಖತೆ, ಹಾಗೂ ನೆರಳಿನಾಸರೆಯ ಪ್ರಮಾಣಗಳಂತಹಾ ಸ್ಥಳೀಯ ಅನಿರ್ದಿಷ್ಟಾಂಶಗಳಿಂದ ಭಾರೀ ಪ್ರಮಾಣದ ಪ್ರಭಾವಕ್ಕೆ ಒಳಗಾಗುತ್ತದೆ. ಇಷ್ಟು ಮಾತ್ರವಲ್ಲದೇ, ಶೀತಕೆಳಭೂಸ್ತರವು ನೆಲದೊಳಗಿನ ಪ್ರದೇಶದಲ್ಲಿ ತನ್ನ ಬೇರುಗಳನ್ನು ಇಳಿಬಿಡುವ ವೃಕ್ಷಗಳ ಸಾಮರ್ಥ್ಯದ ಮೇಲೆ ಪ್ರಧಾನ ಪರಿಣಾಮವನ್ನು ಬೀರುತ್ತದೆ. ಬೇರುಗಳು ತೀರಾ ಆಳಕ್ಕೆ ತಲುಪಿಲ್ಲದಾಗ, ಭೂಸವಕಳಿಗಳಿಂದ ಹಾಗೂ ಗಾಳಿಯ ಒತ್ತಡಕ್ಕೆ ಬಿದ್ದುಹೋಗುವಂತಹಾ ಅಪಾಯಗಳಿಗೆ ವೃಕ್ಷಗಳು ಈಡಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಮತ್ತಷ್ಟು ಒಡ್ಡಿಕೊಂಡ ಪ್ರದೇಶಗಳಲ್ಲಿ ಬೆಳೆಯಲಾರವು ಎನ್ನುವಂತಹಾ ಅಕ್ಷಾಂಶಗಳಲ್ಲಿ ನದಿಗಳ ಕಣಿವೆ ಪ್ರದೇಶಗಳಲ್ಲಿ ಕೂಡಾ ವೃಕ್ಷಗಳು ಬೆಳೆಯಬಲ್ಲವು. ಸಾಗರಗಳ/ಸಮುದ್ರಗಳ ಪ್ರವಾಹದಂತಹಾ ಸಮುದ್ರೀಯ/ಸಾಗರಿಕ ಪ್ರಭಾವಗಳು ವಿಷುವದ್ರೇಖೆಯಿಂದ ಎಷ್ಟು ದೂರದ ಪ್ರದೇಶಗಳಲ್ಲಿ ವೃಕ್ಷಗಳು ಬೆಳೆಯಬಲ್ಲವು ಎಂಬುದನ್ನು ನಿರ್ಧರಿಸುವುದರಲ್ಲಿ ಪ್ರಧಾನ ಪಾತ್ರ ವಹಿಸುತ್ತವೆ. ಕೆಲವು ಪ್ರಾತಿನಿಧಿಕ ಧೃವಪ್ರದೇಶಗಳಲ್ಲಿನ ವೃಕ್ಷಗಳ ಪಟ್ಟೆಗಳು ಕೆಳಕಂಡಂತಿವೆ: === ಅಂಟಾರ್ಕ್‌ಟಿಕ್‌/ದಕ್ಷಿಣಧೃವದ ವೃಕ್ಷಗಳ ಪಟ್ಟೆಗಳು === ಕೆರ್ಗ್ಯುಯೆಲೆನ್‌ ದ್ವೀಪ, ಐಲ್‌ ಸೇಂಟ್‌-ಪಾಲ್‌, ದಕ್ಷಿಣ ಜಾರ್ಜಿಯಾ, ದಕ್ಷಿಣ ಆರ್ಕ್‌ನಿ ಮತ್ತು ಇತರೆ ಉಪ-ಅಂಟಾರ್ಕ್‌ಟಿಕ್‌/ದಕ್ಷಿಣಧೃವದ ದ್ವೀಪಗಳೆಲ್ಲವೂ ಭಾರೀ ಮಾರುತಗಳಿಗೆ ಒಡ್ಡಲ್ಪಟ್ಟಿರುತ್ತವೆ ಹಾಗೂ ತೀರಾ ಶೀತವಾಗಿರುವ ಬೇಸಿಗೆಯ ವಾತಾವರಣವಾಗಿರುವುದರಿಂದ (ಪಾಚಿ ಬಯಲು/ಜೌಗು ಪ್ರದೇಶ) ಇಲ್ಲಿ ಯಾವುದೇ ಸ್ಥಳೀಯ ಮರಗಳ ತಳಿಗಳಿಲ್ಲ. ಅಂಟಾರ್ಕ್‌ಟಿಕ್‌/ದಕ್ಷಿಣಧೃವದ ಪರ್ಯಾಯದ್ವೀಪ/ದ್ವೀಪಕಲ್ಪವು ಅಂಟಾರ್ಕ್‌ಟಿಕಾ/ದಕ್ಷಿಣ ಧೃವದಲ್ಲಿನ ಅತ್ಯಂತ ಉತ್ತರದ ಪ್ರದೇಶವಾಗಿದ್ದು ಅತ್ಯಂತ ಸೌಮ್ಯವಾದ ಹವಾಮಾನವನ್ನು ಹೊಂದಿದೆ. ಇದು ಟಿ/ತಿಯೆರ್ರಾ ಡೆಲ್‌ ಫ್ಯುಯೆಗೋದ (ಟಿ/ತಿಯೆರ್ರಾ ಡೆಲ್‌ ಫ್ಯುಯೆಗೋ ವೃಕ್ಷಗಳನ್ನು ಹೊಂದಿದೆ) ಮೇಲೆ/ಸನಿಹದಲ್ಲಿ ಇರುವ ಹಾರ್ನ್‌ ಭೂಶಿರದಿಂದ 1,080 (670 )ದಷ್ಟು ಅಕ್ಷಾಂಶದಲ್ಲಿದೆ. ಆದರೆ ಅಂಟಾರ್ಕ್‌ಟಿಕಾ/ದಕ್ಷಿಣ ಧೃವದಲ್ಲಿ ಯಾವುದೇ ರೀತಿಯ ವೃಕ್ಷಗಳು ಜೀವಿಸುವುದಿಲ್ಲ. ವಾಸ್ತವವಾಗಿ ಕೇವಲ ಕೆಲವೇ ಕೆಲವು ಹುಲ್ಲುಗಳು,ಪಾಚಿಗಳು ಹಾಗೂ ಬೂಸಣಿಗೆಗಳ ತಳಿಗಳು ಈ ಪರ್ಯಾಯ ದ್ವೀಪದಲ್ಲಿ ಜೀವಿಸಬಲ್ಲವಾಗಿದೆ. ಇಷ್ಟು ಮಾತ್ರವಲ್ಲದೇ ಪರ್ಯಾಯ ದ್ವೀಪದ ಸಮೀಪವಿರುವ ಯಾವುದೇ ಉಪಅಂಟಾರ್ಕ್‌ಟಿಕ್‌/ದಕ್ಷಿಣಧೃವದ ದ್ವೀಪಗಳಲ್ಲಿ ಕೂಡಾ ಯಾವುದೇ ವೃಕ್ಷಗಳು ಉಳಿಯುವುದಿಲ್ಲ. == ಇವನ್ನೂ ಗಮನಿಸಿ‌ == ಇಕೋಟೋನ್‌ : ಎರಡು ನಿಕಟತಮ ಪರಿಸರಶಾಸ್ತ್ರೀಯ ಸಮುದಾಯಗಳ ನಡುವೆ ಸ್ಥಿತ್ಯಂತರ ತುದಿ ಪರಿಣಾಮ/ಎಡ್ಜ್‌ ಎಫೆಕ್ಟ್ : ಪರಿಸರ ವ್ಯವಸ್ಥೆಯ ಮೇಲೆ ಪರಸ್ಪರ ವಿರುದ್ಧವಾದ ವಾತಾವರಣಗಳ ಪರಿಣಾಮ ಮಾಸ್ಸೆನೆರ್‌ಹೆಬಂಗ್‌ ಪರಿಣಾಮ/ಎಫೆಕ್ಟ್‌ ಟಂಡ್ರಾ/ಜೌಗು ನೆಲ : ಅಲ್ಪ ತಾಪಮಾನದ ಪರಿಸ್ಥಿತಿ ಹಾಗೂ ಅಲ್ಪಾವಧಿಯ ಬೆಳವಣಿಗೆಯ ಕಾಲಗಳಿಂದಾಗಿ ಮರಗಳ ಬೆಳವಣಿಗೆ ಕುಂಠಿತಗೊಳ್ಳುವ ಪ್ರದೇಶ == ಉಲ್ಲೇಖಗಳು‌ == == ಹೆಚ್ಚಿನ ಓದಿಗಾಗಿ == ಆರ್ನೋ, . . & ಹ್ಯಾಮರ್ಲಿ, . . 1984. ಟಿಂಬರ್‌ಲೈನ್‌. ಮೌಂಟೇನ್‌ ಅಂಡ್‌ ಆರ್ಕ್‌ಟಿಕ್‌ ಫಾರೆಸ್ಟ್ ಫ್ರಾಂಟೀಯರ್ಸ್‌. ದ ಮೌಂಟೆನೀರ್ಸ್‌, ಸಿಯಾಟಲ್‌. 0-89886-085-7 ಬೆರಿಂಗರ್‌, ., ಟಾ/ಟ್ಯಾಪ್ಪರ್‌, . ., ಮೆಕ್‌ಹುಗ್‌, ., ಲಿಂಚ್‌, . ., ಸೆರ್ರೆಜ್‌, . ., & ಸ್ಲೇಟರ್‌, . 2001. ಹವಾಮಾನದ ಸ್ಥಿತಿಗತಿಗಳ ಮೇಲೆ ಉತ್ತರಧೃವದ/ಆರ್ಕ್‌ಟಿಕ್‌ ವೃಕ್ಷಗಳ ಪಟ್ಟೆಗಳ ಪ್ರಭಾವ. ಜಿಯೋಫಿಸಿಕಲ್‌ ರಿಸರ್ಚ್‌ ಲೆಟರ್ಸ್‌ 28 (22): 4247-4250. ಕಾರ್ನರ್‌, . 1998. ಉನ್ನತ ಔನ್ನತ್ಯದ ವೃಕ್ಷಗಳ ಪಟ್ಟೆಗಳ ಸ್ಥಾನಗಳ ಮರು ಪರಿಶೀಲನೆ ಹಾಗೂ ಅವುಗಳ ವಿವರಣೆ. ಓಯಿಕೋಲಾಜಿಯಾ 115:445-459. ಓಡಮ್, . 1979. ಉತ್ತರ ಅಟ್ಲಾಂಟಿಕ್‌ ಮಹಾಸಾಗರದ ಪ್ರದೇಶಗಳಲ್ಲಿ, ವಿಶೇಷವಾಗಿ ಗ್ರೀನ್‌ಲೆಂಡ್/ಲ್ಯಾಂಡ್‌ ಹಾಗೂ ಪಾರೋಸ್‌ಗಳಲ್ಲಿ ವಾಸ್ತವಿಕ ಹಾಗೂ ಸಂಭಾವ್ಯ ವೃಕ್ಷಗಳ ಪಟ್ಟೆ. ಹೋಲಾರ್ಕ್‌ಟಿಕ್‌ ಇಕಾಲಜಿ 2: 222-227. ಓಡಮ್, . 1991. ಗ್ರೀನ್‌ಲೆಂಡ್‌/ಲ್ಯಾಂಡ್‌ ಮತ್ತು ಫಾರೋ ದ್ವೀಪಗಳಲ್ಲಿನ ವೃಕ್ಷ ವ್ಯವಸಾಯಗಳ ತಳಿಗಳ ಆಯ್ಕೆ ಹಾಗೂ ಅವುಗಳ ಮೂಲ. ಡಾನ್ಸ್‌ಕ್‌ ಡೆಂಡ್ರೋಲಾಜಿಸ್ಕ್‌ ಅರ್ಸ್‌ಕ್ರಿಫ್ಟ್‌ 9: 3-78. ಸಿಂಗ್, . . 2008. ವಾತಾವರಣ ಬದಲಾವಣೆಗಳಿಗೆ ಸಂಬಂಧಿಸಿದಂತೆ ಉನ್ನತ ಪರ್ವತದ/ಅಲ್ಪೈನ್‌ ಗಿಡ ಪರಿಸರ ವ್ಯವಸ್ಥೆಗಳು. . 14: 54-57.